ಯಾದವ ಪ್ರಕಾಶ
	11-12 ನೆಯ ಶತಮಾನದಲ್ಲಿ ಬಾಳಿದ ಅದ್ವೈತ ಪಂಥಕ್ಕೆ ಸೇರಿದ ಆಚಾರ್ಯರಲ್ಲಿ ಒಬ್ಬ. ಸ್ಥಳ ಕಾಂಚೀಪುರ, ರಾಮಾನುಜಾಚಾರ್ಯರ (1037-1137) ಸಮಕಾಲೀನ. ರಾಮಾನುಜಾಚಾರ್ಯ ಈತನಲ್ಲಿ ಮೊದಲು ವೇದಾಂತವನ್ನು ಅಧ್ಯಯನ ಮಾಡಿದ. ಆದರೆ ಗುರುಗಳ ಅದ್ವೈತ ಮತದಲ್ಲಿ ಅನೇಕ ದೋಷಗಳನ್ನು ಕಂಡ ಈತ ಅನಂತರ ಬೇರೆಯಾದ. 1040ರಲ್ಲಿ ಯಾದವ ಪ್ರಕಾಶ ಅದ್ವೈತ ಭಾಷ್ಯ ಬರೆದನೆಂದು ಪ್ರತೀತಿ ಇದೆ. ಆದರೆ ಆ ಗ್ರಂಥ ಸಿಕ್ಕಿಲ್ಲ. ಯಾದವ ಪ್ರಕಾಶ ಕಾಲಾಂತರದಲ್ಲಿ ರಾಮಾನುಜರ ಪಂಥಕ್ಕೆ ಸೇರಿದನೆಂದು ಐತಿಹ್ಯವಿದೆ. ಈತ ಯತಿಧರ್ಮ ಸಮಚ್ಚಯ ಎಂಬ ಗ್ರಂಥ ಬರೆದಿರುವನು. ಅದರಲ್ಲಿ ಶ್ರೀವೈಷ್ಣದ ಧರ್ಮದ ತ್ರಿದಂಡಿ ಸನ್ಯಾಸಿಗಳು ಅನುಸರಿಸಬೇಕಾದ ಧರ್ಮವನ್ನು ಕುರಿತ ವಿವರಗಳಿವೆ.					 
   (ಎಂ.ವೈ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ